GLOBALReach.org Help
• ದಾಖಲೆಗಳನ್ನು ವೀಕ್ಷಿಸು/ಡೌನ್‍ಲೋಡ್ ಮಾಡು
• ಅಡೋಬ್ ಆಕ್ರೋಬ್ಯಾಟ್‍ನಲ್ಲಿ ಪಠ್ಯವನ್ನು ಮುದ್ರಿಸುವುದು ಹೇಗೆ
• ಆಡಿಯೋ ಮತ್ತು ವೀಡಿಯೋ ಪಠ್ಯಗಳು
• GlobalREACH.org ನ ಬಹುಭಾಷಾ ವೈಶಿಷ್ಟ್ಯವನ್ನು ಉಪಯೋಗಿಸುವುದು ಹೇಗೆ
• ನಾನು ಯಾವ ರೀತಿ ನನ್ನ ಪರೀಕ್ಷಾ ದರ್ಜೆಗಳನ್ನು ಹೊಂದುವುದು? ನಾನು ಯಾವ ರೀತಿ ಪೂರಕ ಪ್ರಮಾಣ ಪತ್ರ ಪಡೆಯುವುದು?
ಯಾವ ರೀತಿ ದಾಖಲೆಗಳನ್ನು ವೀಕ್ಷಿಸುವುದು/ಡೌನ್‍ಲೋಡ್ ಮಾಡುವುದು (ಲಭ್ಯವಿದ್ದಲ್ಲಿ ಮಾತ್ರ)
GlobalREACH.org ನಲ್ಲಿನ ಈ ದಾಖಲೆ-ಆಧಾರಿತ ಪಠ್ಯಗಳು ಮತ್ತು ಪಾಠಗಳು ಪಿ.ಡಿ.ಎಫ್ ರೂಪದಲ್ಲಿ ಪದರ್ಶಿಸಲ್ಪಟ್ಟಿದೆ, ಇವು ನಿಮಗೆ ಸುಲಭವಾಗಿ ವೀಕ್ಷಿಸಲು, ಡೌನ್‍ಲೋಡ್ ಮಾಡಲು ಮತ್ತು ಮುದ್ರಿಸಲು ಸಹಾಯಕರವಾಗಿರುತ್ತದೆ. ನೀವು ಅಕ್ರೋಬ್ಯಾಟ್ ರೀಡರ್ 6.0 ಅಥವಾ ಅದಕ್ಕಿಂತ ಹೆಚ್ಚಿನ ಸಾಫ್ಟ್‍ವೇರ್ ಅನ್ನು ಅನುಸ್ಥಾಪಿಸಿ. ನೀವು ಈ ವೆಬ್‍ಸೈಟ್‍ನಿಂದ ಆ ಸಾಫ್ಟ್‍ವೇರ್‍ಅನ್ನು ಡೌನ್‍ಲೋಡ್ ಮಾಡಬಹುದು ಅಥವಾ adobe.com ಗೆ ಭೇಟಿಕೊಡಿ.ಪುನಃ ಮೇಲಕ್ಕೆ
ಅಡೋಬ್ ಆಕ್ರೋಬ್ಯಾಟ್‍ನಲ್ಲಿ ಪಠ್ಯವನ್ನು ಮುದ್ರಿಸುವುದು ಹೇಗೆ
1. ನೀವು ಡೌನ್‍ಲೋಡ್ ಮಾಡಲು ಬಯಸುವ ಪಠ್ಯಕ್ಕಾಗಿ ಅಥವಾ ಪಾಠಕ್ಕಾಗಿ ನಿಮ್ಮ ಬ್ರೌಸರ್‍ನಲ್ಲಿನ ಸಂಪರ್ಕ ಕೊಂಡಿಯ ಮೇಲೆ ಕ್ಲಿಕ್ ಮಾಡಿ. 2. ಪಠ್ಯವು ಅಡೋಬ್ ಆಕ್ರೋಬ್ಯಾಟ್‍ನಲ್ಲಿ ತೆರೆಯಲ್ಪಡುತ್ತದೆ. 3. ವಿಂಡೋವ್‍ನ ಮೇಲಿನ ಭಾಗದಲ್ಲಿನ “ಫೈಲ್” ಎಂಬುದರ ಮೇಲೆ ಕ್ಲಿಕ್ ಮಾಡಿ. 4. “ಪ್ರಿಂಟ್” ಎಂಬುದರ ಮೇಲೆ ಕ್ಲಿಕ್ ಮಾಡಿ. 5. ಪ್ರಿಂಟ್ ಎಂಬ ಪೆಟ್ಟಿಗೆಯಲ್ಲಿ, “ಪೇಜ್ ಸ್ಕೇಲಿಂಗ್” ಎಂಬುವುದನ್ನು ಡ್ರಾಪ್ ಡೌನ್ ಮೆನುವಿನಲ್ಲಿ ಕಾಣುವಿರಿ. ಅದು “ಫಿಟ್ ಟು ಪ್ರಿಂಟೆಬಲ್ ಏರಿಯಾ” ಎಂದು ತಿಳಿಸುತ್ತದೆ. ಈ ರೀತಿ ತಿಳಿಸದಿದ್ದರೆ ಡ್ರಾಪ್ ಡೌನ್ ಮೆನುವಿಗೆ ಹಿಂತೆರಳಿ “ಫಿಟ್ ಟು ಪ್ರಿಂಟೆಬಲ್ ಏರಿಯಾ” ಅನ್ನು ಆಯ್ಕೆಮಾಡಿರಿ. 6. ನಿಮ್ಮ ಪ್ರಿಂಟರ್ ಪಕ್ಕದಲ್ಲಿರುವ “ಪ್ರಾಪರ್ಟಿಸ್” ಎಂಬ ಗುಂಡಿಯ ಮೇಲೆ ಕ್ಲಿಕ್ ಮಾಡಿ. ಮುದ್ರಣಕ್ಕಾಗಿ ತಿಳಿಸುವ ಪೆಟ್ಟಿಗೆ ಕಾಣುತ್ತದೆ. 7. ಈ ಪೆಟ್ಟಿಗೆಯಲ್ಲಿನ “ಅಡ್ವಾನ್ಸ್ಡ್” ಎಂಬುದರ ಮೇಲೆ ಕ್ಲಿಕ್ ಮಾಡಿ. 8. ಕಾಗದದ ಗಾತ್ರ ಡ್ರಾಪ್‍ಡೌನ್ ಮೆನುವನ್ನು ಗಮನಿಸಿ. ಅದು ನಿಮ್ಮ ಪ್ರಿಂಟರ್‍ನಲ್ಲಿರುವ ಕಾಗದದ ವಿಧವನ್ನು ಸೂಚಿಸತಕ್ಕದ್ದು. ಉದಾಹರಣೆಗಾಗಿ, ನೀವು ನಿಮ್ಮ ಪ್ರೀಟರ್‍ನಲ್ಲಿ A4 ಗಾತ್ರದ ಕಾಗದ ಹೊಂದಿದ್ದರೆ, ಅದು “A4” ಎಂದು ತಿಳಿಸತಕ್ಕದ್ದು. ಒಂದುವೇಳೆ ಇದು ಸರಿಯಾದ ಗಾತ್ರದ ಕಾಗದ ಹೊಂದಿಲ್ಲದಿದ್ದರೆ, ದಯವಿಟ್ಟು ಸರಿಯಾದ ಕಾಗದದ ಗಾತ್ರವನ್ನು ಆಯ್ಕೆಮಾಡಿರಿ. 9. “ಅಡ್ವಾನ್ಸ್ಡ್ ಆಪ್ಸನ್ಸ್” ಪೆಟ್ಟಿಗೆಯನ್ನು ಮುಚ್ಚಲು “ಒಕೆ” ಎಂಬ ಗುಂಡಿಯ ಮೇಲೆ ಕ್ಲಿಕ್ ಮಾಡಿ. 10. “ಡಾಕ್ಯುಮೆಂಟ್ ಪ್ರಾಪರ್ಟಿಸ್” ಪೆಟ್ಟಿಗೆಯನ್ನು ಮುಚ್ಚಲು ಪುನಃ “ಒಕೆ” ಎಂಬ ಗುಂಡಿಯ ಮೇಲೆ ಕ್ಲಿಕ್ ಮಾಡಿ. 11. “ಪ್ರಿಂಟ್” ಪೆಟ್ಟಿಗೆಯನ್ನು ಮುಚ್ಚಲು ಮತ್ತು ದಾಖಲೆ ಸರಿಯಾಗಿ ಮುದ್ರಿತವಾಗಲು “ಒಕೆ” ಎಂಬ ಗುಂಡಿಯ ಮೇಲೆ ಕ್ಲಿಕ್ ಮಾಡಿ.ಯಾವ ರೀತಿ ಆಡೀಯೋ ಕೇಳುವುದು ಮತ್ತು ವೀಡಿಯೋ ವೀಕ್ಷಿಸುವುದು (ಲಭ್ಯವಿದ್ದಲ್ಲಿ)
ನೀವು ಈ ಕೆಳಗಿನ ಶಿರೋನಾಮೆ ಸಂಪರ್ಕ ಕೊಂಡಿಯ ಮೇಲೆ ಕ್ಲಿಕ್ ಮಾಡುವ ಮೂಲಕ ವೀಡಿಯೋ ಪಾಠಗಳನ್ನು ವೀಕ್ಷಿಸಬಹುದು: "MP3 (56K)” ಅಥವಾ “MP3(100K)”, ಪ್ಲೇಯರ್‍ನಲ್ಲಿರುವ ಪಾಠವನ್ನು ಕ್ಲಿಕ್ ಮಾಡುವ ಮೂಲಕ, ತ್ರಿಕೋನಾಕಾರದ ಗುಂಡಿಯನ್ನು (►) ಅಥವಾ “ವೀಡಿಯೋ ವೀಕ್ಷಿಸು”. ನಾವು AddThis.com ನ ಚಿಹ್ನೆಗಳನ್ನು ಸೇರಿಸಿಕೊಂಡಿರುವುದು ನೀವು ಪಾಠಗಳನ್ನು ಡೌನ್‍ಲೋಡ್ ಮಾಡಲು ಅಥವಾ ಇತರರೊಂದಿಗೆ ಹಂಚಲು ನಿಮಗೆ ಸಹಾಯವಾಗುವಂತೆಯೇ.ಎಲ್ಲಾ ವೀಡಿಯೋ ದಾಖಲೆಗಳನ್ನು ಚಾಲನೆ ಮಾಡಲು ನೀವು ಖಡ್ಡಾಯವಾಗಿ ಅಡೋಬ್ ಫ್ಲಾಶ್ ಪ್ಲೆಯರ್ ಹೊಂದಿರಬೇಕು. ನೀವು ಈ http://get.adobe.com/flashplayer/ ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು
ಪುನಃ ಮೇಲಕ್ಕೆ
GlobalREACH.org ನ ಬಹುಭಾಷಾ ವೈಶಿಷ್ಟ್ಯವನ್ನು ಉಪಯೋಗಿಸುವುದು ಹೇಗೆ
GlobalREACH.org ಯು ನೀವು ಒಂದು ಭಾಷೆಯಲ್ಲಿ ಬ್ರೌವ್ಸ್ ಮಾಡಲು ಮತ್ತು ಮತ್ತೊಂದು ಭಾಷೆಯಲ್ಲಿ ದಾಖಲೆಗಳನ್ನು ಡೌನ್‍ಲೋಡ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ.ನೀವು ಆಯ್ಕೆಮಾಡಿದ ಪಠ್ಯ ಮತ್ತು ಪಾಠವು ಮತ್ತೊಂದು ಭಾಷೆಯಲ್ಲಿ ಲಭ್ಯವಿರುವಾಗ ಗೋಚರವಾಗುವ ಭಾಷಾ ಮೆನ್ಯುವನ್ನು ಆರಿಸಿರಿ
- ಒಮ್ಮೆ ನೀವು ಮತ್ತೊಂದು ಭಾಷೆಯನ್ನು ಆರಿಸಿದಾಗ, ಲಭ್ಯವಿರುವ ದಾಖಲೆಗಳ (ಮತ್ತು ಮಾಧ್ಯಮಗಳು ಲಭ್ಯವಿದ್ದರೆ) ಸಂಪರ್ಕಕೊಂಡಿ ಗೋಚರವಾಗುತ್ತದೆ.
- ಒಂದುವೇಳೆ ಒಂದಕ್ಕಿಂತ ಹೆಚ್ಚು ಪಾಠಗಳು ಲಭ್ಯವಿದ್ದರೆ, ನೀವು ಪ್ರತಿ ಪಾಠಕ್ಕಾಗಿ ಭಾಷೆಯನ್ನು ಆರಿಸತಕ್ಕದ್ದು.
- ಈ ಸಂಪರ್ಕಕೊಂಡಿಗಳು ನೀವು ಡೌನ್‍ಲೋಡ್ ಮಾಡುವ ಭಾಷೆಯಲ್ಲಿ ಗೋಚರವಾಗುತ್ತದೆ, ಬದಲಾಗಿ ನೀವು ಬ್ರೌವ್ಸ್ ಮಾಡುವ ಭಾಷೆಯಲ್ಲಲ್ಲ. ಆದಾಗ್ಯೂ, ಫೈಲ್‍ನ ಹೆಸರುಗಳು ನಿಮ್ಮ ಬ್ರೌಸರ್‍ನ ಸ್ಟೇಟಸ್ ಬಾರ್‍ನಲ್ಲಿ (ಕೆಳಗಿನ ಬಾರ್) ಗೋಚರವಾಗುತ್ತದೆ. ಮತ್ತು ಅವುಗಳು ನೀವು ಬಯಸುವ ಫೈಲ್‍ಗಳನ್ನು ಪತ್ತೆಹಚ್ಚಲು ನಿಮಗೆ ಸಹಾಯ ಮಾಡುತ್ತವೆ.
-
ಫೈಲ್ಸ್ ವಿಸ್ತರಣೆಯನ್ನು ಗಮನಿಸಿ (ಫೈಲ್‍ನ ಹೆಸರಿನ ಕೊನೆಯ ಮೂರು ಪದಗಳು). ಒಂದುವೇಳೆ ಅದು “ಪಿಡಿಎಫ್” ಎಂದು ತೋರಿಸಿದರೆ ಅದು ಪುಸ್ತಕವಾಗಿರುತ್ತದೆ. ಒಂದುವೇಳೆ ಅದು “mp3” ಎಂದು ತೋರಿಸಿದರೆ ಅದು ಆಡಿಯೋ ಫೈಲ್ ಆಗಿರುತ್ತದೆ.
ಪುನಃ ಮೇಲಕ್ಕೆ
ನಾನು ಯಾವ ರೀತಿ ನನ್ನ ಪರೀಕ್ಷಾ ದರ್ಜೆಗಳನ್ನು ಹೊಂದುವುದು? ನಾನು ಯಾವ ರೀತಿ ಪೂರಕ ಪ್ರಮಾಣ ಪತ್ರ ಪಡೆಯುವುದು?
ಈ ವೆಬ್‍ಸೈಟ್‍ನಲ್ಲಿನ ವಿಷಯಗಳು ನಿಮ್ಮ ವೈಯಕ್ತಿಕ ಮನೋರಂಜನೆಗಾಗಿ ಮತ್ತು ಕ್ರಿಸ್ತ ನಂಬಿಕೆಯಲ್ಲಿನ ಬೆಳವಣಿಗೆಗಾಗಿ ಉಚಿತ ವೆಚ್ಚದಲ್ಲಿ ನಿಮಗೆ ನೀಡಲಾಗುತ್ತಿದೆ. ಶೋಚನಿಯವಾಗಿ, ನಾವು ಈ ಪರೀಕ್ಷೆಗಳಿಗೆ ಉಚಿತ ವೆಚ್ಚದಲ್ಲಿ ದರ್ಜೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ಉಚಿತ ವೆಚ್ಚದಲ್ಲಿ ಪ್ರಮಾಣಪತ್ರಗಳನ್ನು ಸಹ ನೀಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಾವು ಈ ಸೇವೆಗಳನ್ನು ಶುಲ್ಕಕ್ಕಾಗಿ ನೀಡಬಹುದು. ಹೆಚ್ಚಿನ ವಿವರಗಳನ್ನು ನಮ್ಮಿಂದ ಕೇಳಲು ದಯವಿಟ್ಟು ‘ನಮ್ಮನ್ನು ಸಂಪರ್ಕಿಸಿ’ ಪುಟವನ್ನು ನೋಡಿರಿ.
ಪುನಃ ಮೇಲಕ್ಕೆ
ಹೆಚ್ಚಿನ ಸಹಾಯವು ಆಂಗ್ಲ, ಫ್ರೆಂಚ್, ರಷ್ಯನ್ ಮತ್ತು ಸ್ಪ್ಯಾನಿಶ್ ಸಹಾಯ ಫೈಲ್‍ನಲ್ಲಿ ಲಭ್ಯವಿದೆ. ಈ ಭಾಷೆಗಳಲ್ಲಿನ ಒಂದರ ಸಹಾಯ ಫೈಲ್‍ಗೆ ಹೋಗಲು, ದಯವಿಟ್ಟು ಅನ್ವೇಷಣಾ ಸಂಪನ್ಮೂಲದಲ್ಲಿ ನಿಮ್ಮ ಭಾಷೆಯನ್ನು ಆರಿಸಿರಿ, ಇದು ಮೇಲಿನ ಎಡ ಮೂಲೆಯಲ್ಲಿನ ಪುಲ್ ಡೌನ್ ಮೆನುವಿನಲ್ಲಿ ಲಭ್ಯವಿದೆ.
ವೈಶಿಷ್ಟ್ಯವಾದ ಪಠ್ಯ
ನೀವು ಯೇಸುವನ್ನು ನಿಮ್ಮ ರಕ್ಷಕನನ್ನಾಗಿ ಅಂಗೀಕರಿಸಿಕೊಂಡ ಆ ಕ್ಷಣವೇ, ನೀವು ಹೊಸ ಜೀವಿತವನ್ನು ಪ್ರಾರಂಭಿಸಿದಿರಿ. ಆತನು ಅದ್ಭುತಕರವಾದ, ಸಿರಿತನದ ಮತ್ತು ಎಂದಿಗೂ ಕೊನೆಗೊಳ್ಳದ ಸಂತೋಷಕರ ಜೀವನವನ್ನು ಕೊಡುವಾತನು. ಈ ಪಠ್ಯವು ಲೂಯಿಸ್ ಜೆಟರ್ ವಾಕರ್ರವರಿಂದ ಬರೆಯಲ್ಪಟ್ಟಿದೆ. ಇದು ಹೊಸ ಜೀವಿತವು ಯಾವುದರ ಬಗೆಗಿನದು ಎಂಬುದನ್ನು ವಿವರಿಸಲು ಸಹಾಯ ಮಾಡುತ್ತದೆ.