ಒಂದು ಮಗು ತಾನು ನಡೆಯುವುದನ್ನು ಕಲಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ?. ಆಗತಾನೇ ನಿಲ್ಲಲು ಕಲಿತ ಮಗು ಕೋಣೆಯಲ್ಲೆಲ್ಲಾ ತೂರಾಡುತ್ತಾ ಸಿಕ್ಕುವುದನ್ನೆಲ್ಲಾ ಹಿಡಿದುಕೊಂಡು ನಡೆಯಲು ಪ್ರಯತ್ನಿಸುತ್ತದೆ. ಆದರೆ ಅದಕ್ಕಿರುವ ಉಲ್ಲಾಸ ನೋಡಿರಿ – ಇಡೀ ಲೋಕವನ್ನು ಜಯಿಸಿದ ಹಾಗೆ ತೋಚುತ್ತದೆ. ಈ ಮಗು ಮುನ್ನಡೆಯುತ್ತಾ, ಎದ್ದುನಿಲ್ಲುತ್ತಾ, ಒಮ್ಮೊಮ್ಮೆ ಬೀಳುತ್ತಿರುತ್ತದೆ – ಆದರೆ ಯಾವಾಗಲೂ ಎದ್ದು ಪುನಃ ನಡೆಯಲು ಪ್ರಯತ್ನಿಸುತ್ತದೆ – ಈ ಮಗು ನಡೆಯಲು ಕಲಿಯುತ್ತದೆ.
ಯಶಸ್ವಿಯಾಗಬೇಕೆಂದು ಇರುವ ಆಸೆಯು ಬಲವುಳ್ಳದ್ದು. ಎಲ್ಲಾ ಸಮಯವೂ ಪೋಷಕರು ಹತ್ತಿರದಲ್ಲಿರುವರು, ಸಹಾಯ ಮಾಡುವರು ಮತ್ತು ಪ್ರತಿ ಹೆಜ್ಜೆಯಲ್ಲೂ ಪ್ರೋತ್ಸಾಹಿಸುವರು.
ದೇವರು ಯಾವ ರೀತಿ ನಿಮ್ಮೊಂದಿಗೆ ಮಾತನಾಡುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಪಾಠ ನಿಮಗೆ ಸಹಾಯ ಮಾಡುತ್ತದೆ. ಕೆಲವೊಮ್ಮೆ ಆತನು ನಿಮ್ಮೊಂದಿಗೆ ನೇರವಾಗಿ ಮಾತನಾಡುತ್ತಾನೆ. ಬೇರೆ ಸಮಯಗಳಲ್ಲಿ ಆತನು ತನ್ನ ವಾಕ್ಯ (ಸತ್ಯವೇದ) ವನ್ನು ಬಳಸುತ್ತಾನೆ. ಇನ್ನೂ ಇತರ ಸಮಯಗಳಲ್ಲಿ, ಆತನು ಬೇರೆ ಕ್ರೈಸ್ತನನ್ನು ಬಳಸುತ್ತಾನೆ. ನೀವು ಈ ಪಾಠವನ್ನು ಅಧ್ಯಯನ ಮಾಡುವಾಗ, ದೇವರು ಯಾವುದೇ ವಿಧಾನವನ್ನು ಉಪಯೋಗಿಸಿದರೂ ಯಾವ ರೀತಿ ನಿಮ್ಮ ತಂದೆಯ ಧ್ವನಿಯನ್ನು ಗುರ್ತಿಸುವುದು ಎಂಬುದನ್ನು ನೀವು ಅನ್ವೇಷಿಸುತ್ತೀರಿ.
ಈ ಪಾಠವು ಆತ್ಮೀಕ ಬೆಳವಣಿಗೆಯ ನಾಲ್ಕು ಮುಖ್ಯ ತತ್ವಗಳ ಬಗ್ಗೆ ಹೆಚ್ಚಾಗಿ ವಿವರಿಸುತ್ತದೆ. ನೀವು ಇದನ್ನು ಅಧ್ಯಯನ ಮಾಡುವಾಗ, ನೀವು ಅವುಗಳನ್ನು ಯಾವ ರೀತಿ ನಿಮ್ಮ ಜೀವಿತದಲ್ಲಿ ಅಭ್ಯಾಸಕ್ಕೆ ತರಬಹುದು ಎಂಬುದನ್ನು ತಿಳಿಯುವಿರಿ. ಅದ್ಭುತಕರವಾದ ಫಲಿತಾಂಶಗಳು ಹಿಂಬಾಲಿಸುತ್ತವೆ! ಹಾನಿಕಾರಕ ಮಾದರಿಗಳ ಕ್ರಿಯೆಗಳು ಒಳ್ಳೆಯವುಗಳಿಂದ ಸ್ಥಳಾಂತರಿಸಲ್ಪಡುತ್ತವೆ. ನೀವು ದಿನೇ ದಿನೇ ದೇವರು ಬಯಸುವಂತಹ ಪ್ರಬುದ್ಧ ವ್ಯಕ್ತಿಯಾಗಿ ಬೆಳೆಯುವಿರಿ.
ಅದೇ ರೀತಿಯಾದ ಒಂದು ಬದಲಾವಣೆಯು ಈ ಕ್ಷಣದಲ್ಲಿ ನಿಮ್ಮ ಜೀವಿತದಲ್ಲಿ ಉಂಟಾಗುತ್ತಿದೆ. ನಿಮ್ಮ ಆತ್ಮೀಕ ಜೀವಿತವು ವಿಕಾಸಗೊಳ್ಳುತ್ತಿದೆ. ನೀವು ಕ್ರಿಸ್ತನಲ್ಲಿ “ಬೆಳೆಯುವಾಗ”, ಹೊಸ ಆಸಕ್ತಿಯು ಸ್ಥಳಾಂತರಿಸಲ್ಪಡುತ್ತವೆ. ಕೆಲವು ಹೊಸ ಜವಾಬ್ದಾರಿಗಳು ಸಹ ಇವೆ – ಅವುಗಳು ನಿಮಗೆ ಹೊಸ ರೀತಿಯ ಬಹುಮಾನಗಳನ್ನು ಮತ್ತು ತೃಪ್ತಿಯನ್ನು ತರುತ್ತವೆ. ನಾವು ಈ ಪಾಠದಲ್ಲಿ ಆ ವಿಶೇಷ ಬದಲಾವಣೆ ಮತ್ತು ಚಟುವಟಿಕೆಗಳನ್ನು ಗಮನಿಸೋಣ. ಇತರ ಜನರು ಸಹ ನಿಮ್ಮ ಹೊಸ ಆಸಕ್ತಿಗಳನ್ನು ಹಂಚುವುದನ್ನು ನೀವು ಅನ್ವೇಷಿಸುತ್ತೀರಿ.
ಒಬ್ಬ ವ್ಯಕ್ತಿಯು ಒಂದು ವಿಶೇಷವಾದ ಗುರಿ ತಲುಪಲು ಬಯಸಿದರೆ ಮಟ್ಟಗಳು ಸಹ ಅವಶ್ಯವಾದದ್ದು. ಉದಾಹರಣೆಗಾಗಿ, ಓಟಗಾರರು ಅವರ ತರಬೇತುದಾರರ ಸೂಚನೆಗಳನ್ನು ಅನುಸರಿಸುವರು. ಅವರು ಕೆಲವನ್ನು ಮಾಡುತ್ತಾರೆ, ಆದರೆ ಅವರು ಮಾಡದ ಕೆಲವು ಬೇರೆ ಸಂಗತಿಗಳುಂಟು. ಅವರ ಉದ್ದೇಶವೇನೆಂದರೆ ಯುಕ್ತಿಯನ್ನು ಮತ್ತು ಶಕ್ತಿಯನ್ನು ಅಭಿವೃದ್ಧಿಗೊಳಿಸುವುದೇ, ಇದರ ಮೂಲಕ ಅವರು ಬಹುಮಾನವನ್ನು ಗೆಲ್ಲಬಹುದು. ನೀವೀಗ ಕ್ರೈಸ್ತರು, ನಿಮಗೆ ಹೊಸದಾದ, ವಿಶೇಷವಾದ ಗುರಿಗಳಿವೆ. ಆ ಗುರಿಯೇನಂದರೆ ನೀವು ಯಾವ ರೀತಿ ಇರಬೇಕೆಂದು ನಿಮ್ಮ ಪರಲೋಕದ ತಂದೆಯು ಬಯಸುತ್ತಾನೋ ಹಾಗೆಯೇ ಮಾರ್ಪಡುವುದು. ನಿಮಗೆ ಯಾಕೆ ಮಟ್ಟಗಳು ಬೇಕೆಂಬುದಕ್ಕೆ ಇದು ಮತ್ತೊಂದು ಕಾರಣ.
ನಿಮ್ಮ ಪರಲೋಕದ ತಂದೆಗೆ ನಿಮ್ಮ ಬಗೆಗಿರುವ ಯೋಜನೆಯೇನಂದರೆ, ನೀವು ಆತನ ಕುಟುಂಬದಲ್ಲಿ ಪಾಲುಗಾರರಾಗಬೇಕು ಮತ್ತು ಆತನು ನಿಮ್ಮ ಜೀವಿತದಲ್ಲಿ ನಿಮಗಾಗಿ ಇಟ್ಟಿರುವ ಗುರಿಗಳನ್ನು ತಲುಪಬೇಕು ಎಂಬುದೇ. ಈ ಪಾಠವು ದೇವರು ನಿಮಗೆ ಸಹಾಯ ಮಾಡಲು ನೀಡಿರುವ ಹೊಸ ಮಟ್ಟಗಳನ್ನು ವಿವರಿಸುತ್ತದೆ. ಕೆಳಗಿನವುಗಳು ನಿಮಗೆ ಅನೇಕ ಲಾಭಗಳನ್ನು ತರುತ್ತವೆ.
ನೀವು ನಿಮಗೆ ಮಾರ್ಗದರ್ಶಿಸಲು ಪವಿತ್ರಾತ್ಮನನ್ನು ಅನುಮತಿಸುವಾಗ, ದೇವರು ನಿಮಗೆ ಕೊಟ್ಟ ಮಟ್ಟಗಳನ್ನು ಯಾವ ರೀತಿ ಇಟ್ಟುಕೊಳ್ಳಬೇಕೆಂಬುದನ್ನು ಕಲಿತುಕೊಳ್ಳುವುದನ್ನು ನೀವು ಅನ್ವೇಷಿಸುತ್ತೀರಿ. ಪವಿತ್ರಾತ್ಮನು ನಿಮಗೆ ಕೆಟ್ಟದ್ದರಿಂದ ದೂರ ತಿರುಗಿಕೊಳ್ಳಲು ಮತ್ತು ಸರಿಯಾದುದ್ದನ್ನು ಆರಿಸಲು ಶಕ್ತಿಯನ್ನು ನೀಡುತ್ತಾನೆ. ದಿನೇದಿನೇ, ನೀವು ನಿಮ್ಮ ಸ್ವರ್ಗೀಯ ತಂದೆಯಂತೆ ಬೆಳೆಯುವಿರಿ.
ಹೌದು, ನಿಮಗೆ ಅದ್ಭುತಕರವಾದ ಸಹಾಯಕನಿದ್ದಾನೆ! ಆತನು ಯಾರು ಮತ್ತು ಯಾವ ರೀತಿ ನಿಮಗೆ ಸಹಾಯ ಮಾಡುತ್ತಾನೆ ಎಂಬುದನ್ನು ಈ ಪಾಠವು ವಿವರಿಸುತ್ತದೆ.
ನೀವು ಹೇಳುವ ದೇವರ ಬಲ ನಿಜವೇ ಎಂದು ತಿಳಿಯಲು ಅನೇಕರು ನಿಮ್ಮನ್ನು ಗಮನಿಸುತ್ತಿರುತ್ತಾರೆ. ಯಾವ ರೀತಿ ಸುವಾರ್ತೆಯು ಜನರನ್ನು ಬದಲಾಯಿಸುತ್ತದೆ ಎಂಬುದನ್ನು ನಿಮ್ಮ ಜೀವಿತವು ಅವರಿಗೆ ತೋರಿಸುತ್ತದೆ. ನೀವು ಹೇಳುವುದಕ್ಕಿಂತಲೂ ಹೆಚ್ಚಾಗಿ ಮಾಡುವಂಥದು, ಯೇಸುವಿಗಾಗಿ ಸಾಕ್ಷಿಯಾಗಿರುತ್ತದೆ.
ಈ ಪಾಠದಲ್ಲಿ, ಯೇಸು ನಿಮ್ಮಲ್ಲಿ ಜೀವಿಸುವ ಕಾರಣ ನಿಮ್ಮ ಜೀವಿತದಿಂದ ಪ್ರಜ್ವಲಿಸುವಂತಹ ಕೆಲವು ಬೆಳಕಿನ ಕಿರಣಗಳನ್ನು ನಾವು ನೋಡಲಿದ್ದೇವೆ. ಈ ಕಿರಣಗಳು ಸುವಾರ್ತೆ ಸತ್ಯವೆಂಬುದನ್ನು ಇತರರಿಗೆ ಮನವೊಲಿಸಲು ಸಹಾಯ ಮಾಡುತ್ತದೆ.
ಯಥಾರ್ಥ ಕ್ರೈಸ್ತನೆಂಬ ಮನೆಯನ್ನು ಹೊಂದುವುದಕ್ಕಿಂತ ಈ ಲೋಕದಲ್ಲಿ ಬೇರೆ ಯಾವ ಮಹತ್ತಾದ ಆಶೀರ್ವಾದವಿಲ್ಲ. ಇದು ಪಾಪದ ಬಿರುಗಾಳಿಯಿಂದ ಮತ್ತು ಅದರ ಸುತ್ತಲಿರುವ ಎಲ್ಲಾ ತೊಂದರೆಗಳಿಂದ ಆಶ್ರಯವಾಗಿದೆ. ಇದು ಮಕ್ಕಳು ಸುರಕ್ಷಿತ ಮತ್ತು ಪ್ರೀತಿಯುಳ್ಳದ್ದು ಎಂದು ಭಾವಿಸುವ ಸ್ಥಳವಾಗಿದೆ.
ದೇವರು ನಿಮಗೆ ಹೇಳುವ ಪ್ರಕಾರ ನೀವು ಮಾಡಿದರೆ ನಿಮ್ಮ ಮನೆಯನ್ನು “ಸ್ವರ್ಗದ ಸ್ವಲ್ಪವಾಗಿ” ಮಾರ್ಪಡಿಸಬಹುದು
ನೀವು ದೇವರ ಮಕ್ಕಳಾಗಿರುವ ಕಾರಣ ನೀವೀಗ ಹೊಂದಿರುವ ಸ್ವಾತಂತ್ರ್ಯದ ಬಗ್ಗೆ ಈ ಪಾಠವು ವಿವರಿಸುತ್ತದೆ. ಈ ಸ್ವಾತಂತ್ರ್ಯವು ನಿಮ್ಮನ್ನು ಪಾಪದ ಭಯಾನಕ ಪರಿಣಾಮಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ. ದೇವರನ್ನು ಮೆಚ್ಚಿಸಲು ಸಾಧ್ಯವೇ ಇಲ್ಲವೆಂಬ ಭಯದಿಂದ ನಿಮ್ಮನ್ನು ಬಿಡುಗಡೆಗೊಳಿಸುತ್ತದೆ. ನಿಮ್ಮ ಆತ್ಮೀಕ ದೋಷ ಮತ್ತು ಗೊಂದಲಗಳನ್ನು ಜಯಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಯೇಸು ನಿಮಗೋಸ್ಕರ ಮಾಡಿದ ಕಾರ್ಯಗಳ ಕಾರಣ ಈ ಎಲ್ಲಾ ಆಶೀರ್ವಾದಗಳು ನಿಮ್ಮದೇ ಆಗಿವೆ. ಆದರೆ ಅವುಗಳು ಕೇವಲ ಪ್ರಾರಂಭವಷ್ಟೇ.
ಈಗಾಗಲೇ ಪ್ರಾರಂಭಗೊಂಡಿರುವಂತಹ ನಿಮ್ಮ ಸ್ವಾತಂತ್ರ್ಯದ ಹೊಸ ಜೀವಿತವು ಎಂದಿಗೂ ಕೊನೆಯಾಗುವುದಿಲ್ಲ!