ನಾವು ಪ್ರವಾದಿಗಳಿಂದ ಕೇಳುವೆವು

 

ನಾವು ಪ್ರವಾದಿಗಳಿಂದ ಕೇಳುವೆವು
ಈ ಪಠ್ಯದ ಎಂಟು ಪಾಠಗಳು ದೇವರ ಎಂಟು ಪ್ರವಾದಿಗಳ ಜೀವನ ಬದಲಾಯಿಸುವ ಅನುಭವವನ್ನು ದಾಖಲಿಸುತ್ತದೆ. ಈ ಪಠ್ಯದ ನಿಮ್ಮ ಎಚ್ಚರಿಕೆಯ ಅಧ್ಯಯನ ಮತ್ತು ಪ್ರವಾದಿಗಳ ಮಾತಿಗೆ ವಿಧೇಯತ್ವವು, ನೀವು ದೇವರಿಗೆ ಯಾವ ರೀತಿ ನಿಮ್ಮನ್ನೇ ಅರ್ಪಿಸಬೇಕೆಂಬುದನ್ನು ಕಲಿಯಲು ಸಹಾಯಮಾಡುತ್ತವೆ.
 
ಇಡೀ ಪಠ್ಯದ ದಾಖಲೆಯನ್ನು ವೀಕ್ಷಿಸು/ಡೌನ್‍ಲೋಡ್ ಮಾಡು
ಪರಿಚಯ ದಾಖಲೆಯನ್ನು ವೀಕ್ಷಿಸು/ಡೌನ್‍ಲೋಡ್ ಮಾಡು
 
ಪಾಠ 1: ನೋಹ – ಈತನು ದೇವರು ಆಜ್ಞಾಪಿಸಿದ ಹಾಗೆಯೇ ಮಾಡಿದನು
ನೋಹನು ದೇವರ ಶಬ್ದವನ್ನು ಕೇಳಿದನು. ನಾವು ಈ ಪಾಠದಲ್ಲಿ ನೋಹನ ಅನುಭವವನ್ನು ಚರ್ಚಿಸೋಣ. ದೇವರು ನೋಹನಿಗೆ ತಿಳಿಸಿದ ಭಯಂಕರವಾದ ಜಲಪ್ರಳಯವು ಭೂಮಿಯ ಮೇಲೆ ಯಾಕೆ ಬಂತು ಎಂಬುದನ್ನು ನಾವು ಕಲಿಯೋಣ. ಪ್ರಳಯದ ನೀರು ನೋಹನನ್ನು ಸುತ್ತುವರೆದರೂ ಅವನು ಯಾವ ರೀತಿ ಬದುಕುಳಿದನು ಎಂಬುದನ್ನು ಸಹ ನಾವು ಕಂಡುಕೊಳ್ಳೋಣ.
 
ದಾಖಲೆಯನ್ನು ವೀಕ್ಷಿಸು/ಡೌನ್‍ಲೋಡ್ ಮಾಡು
 
ಪಾಠ 2: ಅಬ್ರಹಾಮ – ಈತನು ದೇವರ ಸ್ನೇಹಿತನಾಗಿದ್ದನು
ನೀವು ಯಾವ ರೀತಿ ದೇವರಿಗೆ ನಿಮ್ಮನ್ನೇ ಅರ್ಪಿಸುವುದು ಮತ್ತು ಆತನು ವಾಗ್ದಾನ ಮಾಡಿದ ಆಶೀರ್ವಾದಗಳನ್ನು ಯಾವ ರೀತಿ ಹೊಂದಿಕೊಳ್ಳುವುದು ಎಂಬುದನ್ನು ನೀವು ಅಬ್ರಹಾಮನ ಅನುಭವದಿಂದ ಕಲಿಯಬಹುದು. ದೇವರು ಅಬ್ರಹಾಮನನ್ನು ತನ್ನ ಸೇವಕನಾಗಿಯೂ ಮತ್ತು ಸ್ನೇಹಿತನಾಗಿಯೂ ಇರುವಂತೆ ಆರಿಸಿದನು. ದೇವರು ತನ್ನ ಚಿತ್ತವನ್ನು ಹಿಂಬಾಲಿಸುವವರನ್ನು ಆಶೀರ್ವದಿಸಲು ಇರುವ ಆತನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಆತನು ಇವುಗಳನ್ನು ಕ್ರಮಬದ್ಧವಾಗಿ ಮಾಡಿದನು.
 
ದಾಖಲೆಯನ್ನು ವೀಕ್ಷಿಸು/ಡೌನ್‍ಲೋಡ್ ಮಾಡು
 
ಪಾಠ 3: ಯೋಸೇಫನು – ಈತನು ದೇವರ ಪ್ರೀತಿಯನ್ನು ತೋರಿದನು
ಯೋಸೇಫನ ಜೀವಿತದಲ್ಲಿ, ದೇವರು ನಮಗೆ ತೋರಿಸಲು ಬಯಸುವುದೇನಂದರೆ, ಕೆಟ್ಟ ಜಗತ್ತಿನ ಮದ್ಯದಲ್ಲೂ ಆತನು ಮನುಕುಲಕ್ಕೆ ಒದಗಿಸುತ್ತಾನೆ ಎಂಬುದೇ. ನಾವು ದೇವರ ಮೇಲೆ ಭರವಸೆಯಿಡಬೇಕು ಮತ್ತು ಆತನ ದಾರಿಯನ್ನು ಪ್ರೀತಿಯಿಂದ ಹಾಗೂ ಅರ್ಪಣೆಯಿಂದ ಅನುಸರಿಸಬೇಕೆಂಬುದನ್ನು ಆತನು ನಮಗೆ ಕಲಿಸಲು ಬಯಸುತ್ತಾನೆ.
 
ದಾಖಲೆಯನ್ನು ವೀಕ್ಷಿಸು/ಡೌನ್‍ಲೋಡ್ ಮಾಡು
 
ಪಾಠ 4: ಮೋಶೆ – ಈತನು ದೇವರ ವಾಕ್ಯವನ್ನು ಸ್ವೀಕರಿಸಿದನು
ಈ ಪಾಠದಲ್ಲಿ ನಾವು ಮನುಷ್ಯನ ಇತಿಹಾಸದ ಬಹಳ ಕುತೂಹಲವಾದ ಮತ್ತು ಪ್ರಾಮುಖ್ಯವಾದ ಅಧ್ಯಾಯಗಳನ್ನು ಪರಿಗಣಿಸಲಿದ್ದೇವೆ. ಮೋಶೆಯ ಜೀವನ ಮತ್ತು ಕೆಲಸ, ಬರೆಯಲ್ಪಟ್ಟ ಪ್ರಕಟನೆಯ ವಾಕ್ಯಗಳನ್ನು ದೇವರಿಂದ ಸ್ವೀಕರಿಸಿದ ಮೊದಲ ಮನುಷ್ಯ.
 
ದಾಖಲೆಯನ್ನು ವೀಕ್ಷಿಸು/ಡೌನ್‍ಲೋಡ್ ಮಾಡು
 
ಪಾಠ 5: ದಾವೀದ – ಈತನು ಮನತಿರುಗಿದನು ಮತ್ತು ಕ್ಷಮಿಸಲ್ಪಟ್ಟನು
ಈ ಪಾಠದಲ್ಲಿ, ದೇವರನ್ನು ಮೆಚ್ಚಿಸುವ ಹಂತಗಳನ್ನು ನಾವು ದಾವೀದನಿಂದ ಕಲಿಯೋಣ. ನಾವು ಸಹ ದಾವೀದನು ಹೇಳಿದಂತೆ ಹೇಳೋಣ, “ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು. ನನ್ನ ರಕ್ಷಣೆಯು ಆತನಿಂದಲೇ”.
 
ದಾಖಲೆಯನ್ನು ವೀಕ್ಷಿಸು/ಡೌನ್‍ಲೋಡ್ ಮಾಡು
 
ಪಾಠ 6: ಯೆಶಾಯ – ಈತನು ಈ ಮುನ್ನವೇ ತಿಳಿಸಿದ ರಕ್ಷಣೆ
ಈ ಪಾಠದಲ್ಲಿ, ನಾವು ಯೆಶಾಯನಿಂದ ಕೇಳಲಿದ್ದೇವೆ. ನಮಗಾಗಿರುವ ಆತನ ವಿಶೇಷ ಸಂದೇಶವೇನಂದರೆ: ರಕ್ಷಣೆಯು ದೈವೀಕ ಕೃಪೆಯ ಮತ್ತು ಶಕ್ತಿಯ ಆಧಾರಿತವಾಗಿಯೇ ಬರುವುದು ಹಾಗೂ ಅದು ನಮ್ಮ ಸ್ವಂತ ಬಲದಿಂದಲೋ, ನಮ್ಮ ಧಾರ್ಮಿಕ ಕೆಲಸಗಳಿಂದಲೋ ಬರುವುದಿಲ್ಲ ಎಂಬುದೇ.
 
ದಾಖಲೆಯನ್ನು ವೀಕ್ಷಿಸು/ಡೌನ್‍ಲೋಡ್ ಮಾಡು
 
ಪಾಠ 7: ಸ್ನಾನಿಕನಾದ ಯೋಹಾನನು – ಈತನು ಸಂಪೂರ್ಣವಾದ ತ್ಯಾಗವನ್ನು ಧೃಢೀಕರಿಸಿದನು
ಸ್ನಾನಿಕನಾದ ಯೋಹಾನನು ಸಂಸ್ಕರಿಸಿದ ಮನುಷ್ಯನಲ್ಲ. ಈತನು ಮರುಭೂಮಿಯಲ್ಲಿನ ಒರಟು ಮನುಷ್ಯನು, ಚರ್ಮದ ಹೊದಿಕೆಯನ್ನು ಧರಿಸುತ್ತಿದ್ದ ಮತ್ತು ಸಾಮಾನ್ಯ ಭಾಷೆಯಲ್ಲಿ ಮಾತನಾಡುತ್ತಿದ್ದ. ಆದರೂ, ಜನರು ಹೃದಯದಲ್ಲಿ ಹಸಿವೆ ಮತ್ತು ತವಕ ಅನುಭವಿಸಿದರು. ಅವರು ವಾಗ್ದತ್ತ ಮೆಸ್ಸೀಯನ, ಅಭಿಷಿಕ್ತನು, ಬರಲಿರುವ ವಿಮೋಚಕನ ಸುದ್ಧಿಯನ್ನು ಕೇಳಿದರು.
 
ದಾಖಲೆಯನ್ನು ವೀಕ್ಷಿಸು/ಡೌನ್‍ಲೋಡ್ ಮಾಡು
 
ಪಾಠ 8: ಯೇಸು – ಈತನು ದೇವರನ್ನು ಮನುಷ್ಯರಿಗೆ ಪ್ರಕಟಪಡಿಸಿದನು
ಈ ಪಾಠದಲ್ಲಿ, ಯೇಸು ಎಂಬ ಹೆಸರುಳ್ಳ ವ್ಯಕ್ತಿಯ ರಹಸ್ಯದ ಬಗ್ಗೆ ಹೆಚ್ಚಾಗಿ ಕಲಿಯೋಣ. ತನ್ನ ವಾಕ್ಯದ, ಕ್ರಿಯೆಗಳ ಮತ್ತು ಪ್ರಕಟಿಸಲ್ಪಟ್ಟ ಸತ್ಯಗಳ ಮೂಲಕ ಆತನು ನಮ್ಮೊಂದಿಗೆ ಮಾತನಾಡಲು ನಾವು ಆತನನ್ನು ಅನುಮತಿಸೋಣ.
 
ದಾಖಲೆಯನ್ನು ವೀಕ್ಷಿಸು/ಡೌನ್‍ಲೋಡ್ ಮಾಡು