GlobalREACH.org ಗೆ ಸುಸ್ವಾಗತ



ಗ್ಲೋಬಲ್ ವಿಶ್ವವಿದ್ಯಾನಿಲಯವು ಗ್ಲೋಬಲ್ ರೀಚ್ ಆಗಿದೆ: ಪ್ರತಿ ವಿಶ್ವಾಸಿಗಳಿಗೂ ಉಚಿತ ವೆಚ್ಚದಲ್ಲಿ ಕ್ರಮಬದ್ಧವಾದ ತರಬೇತಿಯನ್ನು ಒದಗಿಸುವುದು.

GlobalREACH.org ಯು ಉಚಿತ ವೆಚ್ಚದಲ್ಲಿ ವಿವಿಧ ಭಾಷೆಗಳಲ್ಲಿ ಸುವಾರ್ತೀಕರಣ, ಶಿಷ್ಯತ್ವ ಮತ್ತು ತರಬೇತಿ ಮೂಲಗಳನ್ನು ಹೊಂದಿವೆ. ಈ ಪಠ್ಯಗಳು ದೇವರ ವಾಕ್ಯದಲ್ಲಿ ಉತ್ತಮ ಉಪನ್ಯಾಸ ಮತ್ತು ಲೋಕಾದಾದ್ಯಂತ ಅನೇಕ ದೇಶಗಳಲ್ಲಿ ಸತ್ಯವೇದಾಧಾರಿತ ತರಬೇತಿಯ ಮೂಲಗಳನ್ನು ಒದಗಿಸುತ್ತದೆ.

ಪ್ರತಿ ತಿಂಗಳು, ಸುಮಾರು 170 ದೇಶಗಳಲ್ಲಿ ವಿಶ್ವಾಸಿಗಳಿಂದ ಸಾವಿರಾರು ಪಠ್ಯಗಳು ಡೌನ್‍ಲೋಡ್ ಮಾಡಲ್ಪಡುತ್ತಿದೆ. ಈ ಪಠ್ಯಗಳು ವ್ಯಕ್ತಿಗಳಿಂದ, ಸಣ್ಣ ಗುಂಪುಗಳಿಂದ, ಭಾನುವಾರ ಶಾಲಾ ತರಗತಿಗಳಿಂದ, ಸತ್ಯವೇದ ಶಾಲೆಗಳಿಂದ, ಸಭಾಪಾಲಕರಿಂದ ಮತ್ತು ಸೇವೆ ಮಾಡುವ ವ್ಯಕ್ತಿಗಳಿಂದ ಉಪಯೋಗಿಸಲ್ಪಡುತ್ತಿದೆ. ಮತ್ತು ಈ ಎಲ್ಲಾ ವಿಶ್ವಾಸಿಗಳಿಗೆ ತಮ್ಮ ಸ್ವಂತ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂಬ ಮತ್ತು ದೇವರ ವಾಕ್ಯವನ್ನು ಅರ್ಥೈಸಿಕೊಳ್ಳಬೇಕೆಂಬ ಒಂದೇ ಗುರಿ ಅವರ ಮನಸ್ಸಿನಲ್ಲಿದೆ.

ಅನೇಕ ಪಠ್ಯಗಳು ಮುದ್ರಿತ ದಾಖಲೆಯ ರೂಪದಲ್ಲಿ ಲಭ್ಯವಿದೆ. ನೀವು ಬಯಸುವಷ್ಟು ಪ್ರತಿಯನ್ನು ಮಾಡಿಕೊಳ್ಳಿರೆಂದು ನಿಮ್ಮನ್ನು ನಾವು ಪ್ರೋತ್ಸಾಹಿಸುತ್ತೇವೆ! ಕೆಲವು ಪಠ್ಯಗಳು ಆಡಿಯೋ ಮತ್ತು ವೀಡಿಯೋ ರೂಪದಲ್ಲಿ ಲಭ್ಯವಿದೆ.

ಸುಮಾರು 120 ಭಾಷೆಗಳಲ್ಲಿನ ಮೂಲಗಳಿಗಾಗಿ ಅಥವಾ ನಿಮ್ಮ ಮನೆಯಲ್ಲಾಗಲೀ ಸಭೆಯಲ್ಲಾಗಲೀ ಸುವಾರ್ತೀಕರಣ ಮತ್ತು ಶಿಷ್ಯತ್ವದ ಅಧ್ಯಯನವನ್ನು ಯಾವ ರೀತಿ ಪ್ರಾರಂಭಿಸುವುದು ಎಂಬುದರ ಮಾಹಿತಿಗಾಗಿ ದಯವಿಟ್ಟು ಇಂದೇ ಗ್ಲೋಬಲ್ ವಿಶ್ವವಿದ್ಯಾನಿಲಯವನ್ನು ಸಂಪರ್ಕಿಸಿ.

ಹೆಚ್ಚಿನ ಮಾಹಿತಿಗಾಗಿ, ಗ್ಲೋಬಲ್ ಯೂನಿವರ್ಸಿಟಿ ಆಫ್ ಇವೆಂಜೆಲಿಸಮ್ ಅಂಡ್ ಡಿಸೈಪಲ್‍ಶಿಪ್ 1-800-443-1083 ಗೆ ಕರೆಮಾಡಿ.